malayalam versiontamil versionkannada versionenglish version
homephoto gallerymathrubhumi officesayappa templespooja calendarguest book
ಸ್ವಾಮಿ ಶರಣಂ || ಮಂಡಲ ಪೂಜೆಗಾಗಿ ಶಬರಿಮಲೆ ನಡೆ ತೆರೆಯಿತು. || ಮಾತೃಭೂಮಿ ಶಬರಿಮಲೆ ಪೋರ್ಟಲ್‌ನಲ್ಲಿ ಈ ಬಾರಿ ಮಲೆಯಾಳದ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್ ಭಾಷೆಗಳಲ್ಲೂ ಇವೆ. || ಶಬರಿಮಲೆ ಶುಚೀಕರಣ ಕೆಲಸಕ್ಕಾಗಿ ಈಬಾರಿ 600 ಮಂದಿ ಕಾರ್ಮಿಕರು ಇರುತ್ತಾರೆ. ||
ಹರಿವರಾಸನಂ  ಮುಖಮಂಟಪ

ಶಬರಿಮಲೆಯಲ್ಲಿ ತೀರ್ಥಾಟಕರಿಗೆ ಸೌಕರ್ಯಗಳನ್ನು ಏರ್ಪಡಿಸಲಾಗಿದೆ

ತಿರುವನಂತಪುರಂ: ಶಬರಿಮಲೆ ತೀರ್ಥಾಟಕರಿಗೆ ಸೌಕರ್ಯಗಳನ್ನು ಏರ್ಪಡಿಸಿರುವುದಾಗಿ ದಕ್ಷಿಣ ರೈಲ್ವೇ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದೆ. ತೀರ್ಥಾಟಕರಿಗಾಗಿ ಪಂಪಾದಲ್ಲಿ ಪ್ರತ್ಯೇಕ ಕಂಪ್ಯೂಟರೀಕೃತ ಮುಂಗಡ ಕಾಯ್ದಿರಿಸುವ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ. ಈ ಹಿಂದೆ ಘೋಷಿಸಲಾದ ಕೊಚ್ಚುವೇಳಿ - ಚೆನ್ನೈ, ಕೊಚ್ಚುವೇಳಿ - ಯಶವಂತಪುರ, ಎರ್ನಾಕುಳಂ - ಬೆಂಗಳೂರು ರೈಲುಗಳಿಗೆ ಹೊರತಾಗಿ ಆಂಧ್ರಪ್ರದೇಶದಿಂದ ಪ್ರತ್ಯೇಕ ರೈಲುಗಳನ್ನೂ ಓಡಿಸಲಾಗುವುದು.
ಜನದಟ್ಟಣೆ ಹೆಚ್ಚಾಗುವುದಿದ್ದರೆ ಈಗ ಓಡುತ್ತಿರುವ ರೈಲುಗಳಲ್ಲಿ ಹೆಚ್ಚು ಬೋಗಿಗಳನ್ನು ಏರ್ಪಡಿಸುವಂತೆಯೂ ತೀರ್ಮಾನಿಸಲಾಗಿದೆ. ತೀರ್ಥಾಟಕರು ಅತಿ ಹೆಚ್ಚು ಉಪಯೋಗಿಸುತ್ತಿರುವ ಕೋಟ್ಟಯಂ, ಚೆಂಗನ್ನೂರು, ಎರ್ನಾಕುಳಂ, ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಇನ್ನೂ ಹೆಚ್ಚು ಅನ್‌ರಿಸರ್‌ವ್‌ಡ್ ಟಿಕೆಟ್ ಕೌಂಟರ್‌ಗಳನ್ನು ಏರ್ಪಡಿಸಲಾಗುವುದು. ಮುಂಗಡ ಕಾಯ್ದಿರಿಸುವ ಕೇಂದ್ರಗಳನ್ನು ಬಲಪಡಿಸಲಾಗುವುದು. ಪ್ರಯಾಣಿಕರಿಗೆ ವಿವಿಧ ಭಾಷೆಗಳಲ್ಲಿ ಮಾಹಿತಿ ನೀಡುವ ಮಾಹಿತಿ ಕೇಂದ್ರಗಳನ್ನು ಏರ್ಪಡಿಸಲಾಗಿದೆ.
ಇದಕ್ಕಾಗಿ ಅಗತ್ಯವಿರುವ ನೌಕರರನ್ನು ಸ್ಟೇಶನುಗಳಲ್ಲಿ ನೇಮಿಸಲಾಗುವುದು.


  • ಪುಟಗಳು
  • ಹಿಂದಿನ ಪುಟ
  • ಮುಂದಿನ ಪುಟ

  • ನಡೆ ತೆರೆಯುವುದು - 4.00
  • ನಿರ್ಮಾಲ್ಯ - 4.05
  • ನೆಯ್ಯಭಿಷೇಕ - 4.15
  • ಗಣಪತಿ ಹೋಮ - 4.20
  • ಪ್ರಾತಃಕಾಲದ ಪೂಜೆ - 7.30
  • ಮಧ್ಯಾ ಪೂಜೆ - 12.30
  • ನಡೆ ತೆರೆಯುವುದು - 4.00
  • ನಿರ್ಮಾಲ್ಯ - 4.05
  • ನೆಯ್ಯಭಿಷೇಕ - 4.15 - 11.30
  • ಗಣಪತಿ ಹೋಮ - 4.20
  • ಪ್ರಾತಃಕಾಲದ ಪೂಜೆ - 7.30
  • ಮಧ್ಯಾ ಪೂಜೆ - 12.30
  • ನಡೆ ಮುಚ್ಚುವುದು - 1.00
  • ನಡೆ ತೆರೆಯುವುದು - 4.00
  • ದೀಪಾರಾಧನೆ - 6.30
  • ರಾತ್ರಿ ಪೂಜೆ - 10.30
  • ಹರಿವರಾಸನಂ - 10.50
  • ನಡೆ ಮುಚ್ಚುವುದು - 11.00