malayalam versiontamil versionkannada versionenglish version
homephoto gallerymathrubhumi officesayappa templespooja calendarguest book
ಸ್ವಾಮಿ ಶರಣಂ || ಮಂಡಲ ಪೂಜೆಗಾಗಿ ಶಬರಿಮಲೆ ನಡೆ ತೆರೆಯಿತು. || ಮಾತೃಭೂಮಿ ಶಬರಿಮಲೆ ಪೋರ್ಟಲ್‌ನಲ್ಲಿ ಈ ಬಾರಿ ಮಲೆಯಾಳದ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್ ಭಾಷೆಗಳಲ್ಲೂ ಇವೆ. || ಶಬರಿಮಲೆ ಶುಚೀಕರಣ ಕೆಲಸಕ್ಕಾಗಿ ಈಬಾರಿ 600 ಮಂದಿ ಕಾರ್ಮಿಕರು ಇರುತ್ತಾರೆ. ||
ಶರಣಂ ಅಯ್ಯಪ್ಪಾ  ಲೇಖನಗಳು

ಆತ್ಮಸಾಕ್ಷಾತ್ಕಾರದ ಹದಿನೆಂಟು ಮೆಟ್ಟಿಲುಗಳು

ಪಿ.ಕೆ. ಸುರೇಂದ್ರನ್

ತೀರ್ಥಾಟನೆಯು ಮನುಷ್ಯನ ತೀರದ ಸತ್ಯಾನ್ವೇಷಣೆಯ ಭಾಗವಾಗಿರುತ್ತದೆ. ಶಾಂತಿ, ಪರಿಶುದ್ಧತೆ, ಆತ್ಮಸಾಕ್ಷಾತ್ಕಾರಗಳಿಗೆ ನಡೆಸುವ ತೀರ್ಥಾಟನೆಯು ಶಬರಿಮಲೆ ಯಾತ್ರೆಯ ಗುರಿಯಾಗಿದೆ. ಆ ಯಾತ್ರೆಯಲ್ಲಿ ಪರಮ ಪವಿತ್ರವಾದ ಹೊನ್ನು ಹದಿನೆಂಟು ಮೆಟ್ಟಿಲುಗಳನ್ನೂ ತೀರ್ಥಾಟಕರು ಏರುತ್ತಾರೆ. ಯಶಸ್ಸಿನ ಕಡೆಗಿನ ಹದಿನೆಂಟು ಮೆಟ್ಟಿಲುಗಳನ್ನು ಹಾದುಹೋಗುವ ಅವರು ಇಡಿ ಪ್ರಪಂಚದ ಆತ್ಮವಾಗಿ ಸಾಕ್ಷಾತ್ಕಾರವನ್ನು ಹೊಂದುತ್ತಾರೆ. ಒಬ್ಬ ಸಾಮಾನ್ಯ ಭಕ್ತನಿಗೆ ಹದಿನೆಂಟು ಮೆಟ್ಟಿಲುಗಳ ವಿಸ್ತಾರವಾದ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಾಗಬೇಕೆಂದಿಲ್ಲ. ವೇದ, ಶಾಸ್ತ್ರ, ಪುರಾಣಗಳು ವಿವರಿಸುವ ಪರಮ ಸತ್ಯವನ್ನು ಹೊನ್ನು ಹದಿನೆಂಟು ಮೆಟ್ಟಿಲುಗಳು ಸಾರುತ್ತವೆ.

ಪಳ್ಳಿಕೆಟ್ಟು ಇರುವವರಿಗೆ ಮಾತ್ರ ಹದಿನೆಂಟು ಮೆಟ್ಟಿಲುಗಳನ್ನು ಮೆಟ್ಟಲು ಸಾಧ್ಯ. ಅಯ್ಯಪ್ಪ ಭಕ್ತರು ಮೆಟ್ಟಿಲಿಗೆ ತೆಂಗಿನಕಾಯಿ ಒಡೆದು ಬಲಗಾಲಿಟ್ಟು ಏರುತ್ತಾರೆ. ಧ್ಯಾನ ನಿರತನಾದ ಭಕ್ತನ ಮನಸ್ಸು ಸ್ಥೂಲ, ಸೂಕ್ಷ್ಮ ಶರೀರಗಳನ್ನು ಭೇದಿಸಿ ಯಥಾರ್ಥವೆಂದು ಭಾವಿಸುವ ಕಾರಣಕ್ಕೆ ತಲುಪಿ ಲಯವಾಗಬೇಕು. ಇದನ್ನು ಪ್ರತೀಕಾತ್ಮಕವಾಗಿ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮವು ಸೂಚಿಸುತ್ತದೆ. ಇಲ್ಲಿ ತೆಂಗಿನಕಾಯಿ ಗೆರಟೆ ಸ್ಥೂಲ ಶರೀರವನ್ನೂ ಬಿಳಿಯಾದ ತಿರುಳು ಸೂಕ್ಷ್ಮ ಶರೀರವನ್ನೂ ಅದರೊಳಗಿನ ನೀರು ಕಾರಣವನ್ನೂ ಸೂಚಿಸುತ್ತದೆ. ಹದಿನೆಂಟು ಮೆಟ್ಟಿಲುಗಳನ್ನು ಮೆಟ್ಟಿ ಮುಂದುವರಿದ ಭಕ್ತನಿಗೆ ಭಟ್ಟಬಂಧವನ್ನು ಹೊಂದಿ ಯೋಗಸಮಾಧಿಯಲ್ಲಿ ಮುಳುಗಿ ಹಸನ್ಮುಖನಾಗಿ ಕುಳಿತಿರುವ ಸಾಕ್ಷಾತ್ ಅಯ್ಯಪ್ಪ ಸ್ವಾಮಿಯ ದರ್ಶನವಾಗುತ್ತದೆ. ಪ್ರತಿಯೊಬ್ಬ ಭಕ್ತನೂ ತನ್ನ ವ್ರತಕಾಲದಲ್ಲಿ ಹದಿನೆಂಟು ಮೆಟ್ಟಿಲುಗಳನ್ನು ಮೆಟ್ಟಿ ಏರುವ ಅರ್ಹತೆಯನ್ನು ಪಡೆಯಬೇಕು. ಶ್ರದ್ಧೆ, ವೀರ್ಯ, ಸ್ಮೃತಿ, ಸಮತಾಬುದ್ಧಿ ಎಂಬಿವು ಯೋಗ್ಯತೆಯಾಗಿದೆ. ಯಮನಿಯಮ ಪಾಲನೆಯಿಂದ ಮಾತ್ರ ಈ ಯೋಗ್ಯತೆ ಬರಬಹುದಷ್ಟೆ.

ಮಾತಿನಲ್ಲಿ, ಕ್ರಿಯೆಯಲ್ಲಿ, ಚಿಂತನೆಯಲ್ಲಿ ಪಾಲಿಸುವ ಅಹಿಂಸೆ, ಸತ್ಯ, ಬಯಕೆಗಳು ತಟ್ಟದೆ ಸ್ವಂತದ್ದಲ್ಲದ್ದು ಯಾವುದನ್ನೂ ಆಶಿಸದೆ ಇರುವುದು (ಅಸ್ತೇಯ), ಬ್ರಹ್ಮಚರ್ಯ, ಇತರರಿಂದ ಯಾವುದನ್ನೂ ಸ್ವೀಕರಿಸದಿರುವುದು (ಅಪರಿಗ್ರಹ) ಎಂಬೀ ಐದು ವಿಚಾರಗಳೇ ಯಮನಿಯಮಗಳು. ಪೂಂಗಾವನದಲ್ಲಿ ೧೮ ಮಲೆಗಳಿವೆ. ಆ ಹದಿನೆಂಟು ಮಲೆಗಳನ್ನೂ ಮೆಟ್ಟಿ ಮಲೆಯ ನಡೆಗೆ (ಗರ್ಭಗುಡಿಯ ಬಳಿಗೆ) ತಲುಪುವುದೆಂದು ನಂಬಿಕೆ. ಹದಿನೆಂಟು ಮೆಟ್ಟಿಲುಗಳಲ್ಲಿ ಪ್ರತಿಯೊಂದು ಒಂದೊಂದು ಮಲೆಯನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯೂ ಇದೆ. ಕಾಳಕೆಟ್ಟಿ, ಇಂಜಿಪ್ಪಾರ, ಪುದುಶ್ಶೇರಿಮಲೆ, ಕರಿಮಲೆ, ನೀಲಿಮಲೆ, ಪೊನ್ನಂಬಲಮೇಡು, ಚಿಟ್ಟಂಬಲ ಮೇಡು, ಮೈಲಾಡುಂಮೇಡು, ತಲಪ್ಪಾರ, ನೀಲಕ್ಕಲ್, ದೇವನ್‌ಮಲೆ, ಶ್ರೀಪಾದ ಮಲೆ, ಕಲ್ಕಿಮಲೆ, ಮಾತಂಗ ಮಲೆ, ಸುಂದರ ಮಲೆ, ನಾಗ ಮಲೆ, ಕಾಡ ಮಲೆ, ಶಬರಿ ಮಲೆ ಎಂಬಿವುಗಳೇ ಆ ಹದಿನೆಂಟು ಮಲೆಗಳು. ಒಬ್ಬ ಸಾಮಾನ್ಯ ವಿಶ್ವಾಸಿಗೆ ಆಗಮ್ಯವಾದ ಈ ಮಲೆಗಳನ್ನು ಆರಾಧಿಸಲು ಹದಿನೆಂಟು ಮೆಟ್ಟಿಲುಗಳು ಅವಕಾಶ ಮಾಡಿಕೊಡುತ್ತವೆಯೆಂದು ಹೇಳಲಾಗಿದೆ. ಅದಲ್ಲ ಮೋಕ್ಷಪ್ರಾಪ್ತಿಗೆ ಮೊದಲು ಮನುಷ್ಯನು ಹಾದು ಹೋಗಬೇಕಾದ ಹದಿನೆಂಟು ಹಂತಗಳನ್ನು ಸೂಚಿಸುವುದೆಂದೂ ಹೇಳಲಾಗುತ್ತಿದೆ. ಅದಕ್ಕನುಸಾರ ಮೊದಲು ಐದು ಮೆಟ್ಟಿಲುಗಳು ಪಂಚೇದ್ರಿಯಗಳನ್ನು ಸೂಚಿಸುತ್ತವೆ. (ಕಣ್ಣು, ಕಿವಿ, ನಾಲಗೆ, ಮೂಗು, ಚರ್ಮ) ಹದಿಮೂರನೆಯ ಮೆಟ್ಟಿಲಿನ ವರೆಗಿನ ಮುಂದಿನ ಎಂಟು ಮೆಟ್ಟಿಲುಗಳನ್ನು ಅಷ್ಟಭಾಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ಢಂಬತನ, ಅಸೂಯೆ ಎಂಬಿವುಗಳನ್ನು ಪ್ರತಿನಿಧಿಸುತ್ತವೆ. ಕೊನೆಯ ೧೭ ಮತ್ತು ೧೮ನೆಯ ಮೆಟ್ಟಿಲುಗಳು ವಿದ್ಯೆ (ಜ್ಞಾನ) ಮತ್ತು ಅವಿದ್ಯೆ (ಅಜ್ಞಾನ) ವನ್ನು ಪ್ರತಿನಿಧಿಸುತ್ತವೆ. ಈ ಪುಣ್ಯ - ಪಾಪಗಳನ್ನು ಸ್ವೀಕರಿಸಿ - ತಿರಸ್ಕರಿಸಿದ ನಂತರ ಮಾತ್ರ ಓರ್ವನಿಗೆ ಈ ಪ್ರಪಂಚವಾದ ಮಾಯೆಯಿಂದ ವಿಮೋಚನೆಯನ್ನೂ ಪಡೆಯಲು ಸಾಧ್ಯ.

೧೮ ಎಂಬ ಸಂಖ್ಯೆಗೆ ಹಿಂದೂ ಧರ್ಮದಲ್ಲಿ ದೊಡ್ಡ ಪ್ರಧಾನ್ಯವಿದೆ. ಭಗವದ್ಗೀತೆಯಲ್ಲಿ ೧೮ ಅಧ್ಯಾಯಗಳಿವೆ. ಕುರುಕ್ಷೇತ್ರ ಯುದ್ಧ ೧೮ ದಿನಗಳ ಕಾಲ ನಡೆಯಿತು. ಪುರಾಣಗಳಿರುವುದು ೧೮. ನಾಲ್ಕು ವೇದಗಳು, ಎಂಟು ಶಾಸ್ತ್ರಗಳು, ಐದು ಇಂದ್ರಿಯಗಳು, ಹಾಗೂ ಮೂರು ದೇವತೆಗಳು ಸೇರಿ ಆಗುವುದು ೧೮. ಸಂಗೀತದಲ್ಲೂ ಇರುವುದು ೧೮ ಮೂಲ ಉಪಕರಣಗಳು. ಹಾಗೆ ಈ ಪ್ರಪಂಚದ ಆತ್ಮವನ್ನೇ ಹುಡುಕುವ ದಾರಿ ಈ ಹದಿನೆಂಟು ಮೆಟ್ಟಿಲುಗಳು. ಶಬರಿಮಲೆಯಲ್ಲಿ ಅತ್ಯಂತ ಪಾವನವಾದ ಒಂದು ಕ್ರಿಯೆಯೆಂದರೆ ಮೆಟ್ಟಿಲುಪೂಜೆ (ಪಡಿಪೂಜೆ) ಹಿಂದೆ ಹನ್ನೆರಡು ವರ್ಷಗಳಿಗೆ ಒಮ್ಮೆ ಮಾತ್ರ ಪಡಿಪೂಜೆ ನಡೆಯುತ್ತಿದ್ದರೆ ಈಗ ಅದು ತೀರ್ಥಾಟನೆಯ ಕಾಲದಲ್ಲೂ ತಿಂಗಳ ಪೂಜೆಗೆ ನಡೆ ತೆರೆಯುವಾಗಲೂ ಹೆಚ್ಚಿನ ದಿನಗಳಲ್ಲಿ ನಡೆಯುತ್ತದೆ. ಶಬರಿಮಲೆಯಲ್ಲಿ ಅತಿಹೆಚ್ಚು ಖರ್ಚಿನ ಪೂಜೆಯೂ ಇದೇ ಆಗಿದೆ. ಸಾಮಗ್ರಿಗಳ ಹೊರತಾಗಿ ಸೇವಾ ಶುಲ್ಕ ರೂ. ೭೫೦/- ಆಗಿದೆ. ಶಬರಿಮಲೆ ತಂತ್ರಿಗಳು ಪಡಿಪೂಜೆ ಮಾಡುತ್ತಾರೆ. ರಾತ್ರಿಯ ಪೂಜೆಗೆ ಮೊದಲು ಒಂದು ಗಂಟೆಗಿಂತಲೂ ಹೆಚ್ಚು ಹೊತ್ತು ನಡೆಯುವ ಪೂಜೆ ಇದು. ಆ ಹೊತ್ತಿನಲ್ಲಿ ಕ್ಷೇತ್ರದ ಇತರ ಎಲ್ಲ ಪೂಜೆಗಳನ್ನು ನಿಲ್ಲಿಸಲಾಗುತ್ತದೆ.

೩ ಕಾಲುದೀಪಗಳು, ೧೮ ತೆಂಗಿನಕಾಯಿ, ೧೮ ಕಲಶಪಾತ್ರೆಗಳು, ೧೮ ಹೂವಿನ ಹಾರಗಳು ಎಂಬಿವು ಪಡಿಪೂಜೆಯ ಪ್ರತ್ಯೇಕತೆಯಾಗಿದೆ.