malayalam versiontamil versionkannada versionenglish version
homephoto gallerymathrubhumi officesayappa templespooja calendarguest book
ಸ್ವಾಮಿ ಶರಣಂ || ಮಂಡಲ ಪೂಜೆಗಾಗಿ ಶಬರಿಮಲೆ ನಡೆ ತೆರೆಯಿತು. || ಮಾತೃಭೂಮಿ ಶಬರಿಮಲೆ ಪೋರ್ಟಲ್‌ನಲ್ಲಿ ಈ ಬಾರಿ ಮಲೆಯಾಳದ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್ ಭಾಷೆಗಳಲ್ಲೂ ಇವೆ. || ಶಬರಿಮಲೆ ಶುಚೀಕರಣ ಕೆಲಸಕ್ಕಾಗಿ ಈಬಾರಿ 600 ಮಂದಿ ಕಾರ್ಮಿಕರು ಇರುತ್ತಾರೆ. ||
ತೀರ್ಥಯಾತ್ರೆ  ಶರಣು ದಾರಿ

ಶರಣು ದಾರಿ

ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬರುವ ಹೆಚ್ಚಿನ ಭಕ್ತರು ರಸ್ತೆ ದಾರಿಯಾಗಿ ಬರುತ್ತಾರೆ. ಪತ್ತನಂತಿಟ್ಟದಿಂದ ಪ್ಲಾಪಿಳ್ಳಿ, ಸೀತಾತೋಡು, ಚಾಲಕ್ಕಯಂ, ದಾರಿಯಾಗಿ ಪಂಪಾಕ್ಕೆ ಬಂದು ಅಲ್ಲಿಂದ ಸನ್ನಿಧಾನಕ್ಕೆ ಬರುತ್ತಾರೆ. ಎರುಮೇಲಿಗೆ ಹೋಗುವವರು ಅಲ್ಲಿಂದ ಪರಂಪರಾಗತವಾದ ಕಾಲ್ನಡಿಗೆ ದಾರಿಯಲ್ಲೋ ಪಂಪಾ ಕಣಿವೆಯಾಗಿ ವಾಹನದಲ್ಲೋ ಪಂಪಾವನ್ನು ತಲುಪುತ್ತಾರೆ. ಪಂಪಾದಿಂದ ನೀಲಿಮಲೆ, ಅಪ್ಪಾಚಿಮೇಡು, ಶಬರೀಪೀಠ, ಶರಂಗುತ್ತಿ, ಮರಕ್ಕೂಟಂ, ದಾರಿಯಾಗಿ ಏಳು ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ನಡೆದೇ ಸನ್ನಿಧಾನವನ್ನು ಸೇರಬೇಕಾಗಿದೆ. ಪಂಪಾದಿಂದ ಮರಕ್ಕೂಟಂ ವರೆಗಿನ ಕಡಿಮೆ ಕಡಿದಾಗಿರುವ ಸ್ವಾಮಿ ಅಯ್ಯಪ್ಪನ್ ರಸ್ತೆಯಾಗಿಯೂ ಮಲೆಯನ್ನು ಏರಬಹುದು. ಈ ರಸ್ತೆಯ “ಸ್ವಾಮಿ ಅಯ್ಯಪ್ಪನ್" ಚಲನಚಿತ್ರದಿಂದ ಲಭಿಸಿದ ಆದಾಯದ ಮೂಲಕ ಶ್ರೀ ಸುಬ್ರಹ್ಮಣ್ಯ ಟ್ರಸ್ಟ್ ನಿರ್ಮಿಸಿದುದಾಗಿದೆ. ಕಡಿದಾಗಿರುವ ಅಪ್ಪಾಚಿ ಮೇಡಿನಲ್ಲಿ ಭಕ್ತರಿಗಾಗಿ ವೈದ್ಯರ ಸಹಾಯವನ್ನು ಏರ್ಪಡಿಸಲಾಗಿದೆ.

ಕುಮಳಿಯಿಂದ ಕೆ.ಕೆ. ರೋಡ್ ದಾರಿಯಾಗಿ ವಂಡಿಪ್ಪೆರಿಯಾರನ್ನು ತಲುಪಿ ಅಲ್ಲಿಂದ ಉಪ್ಪುಪ್ಪಾರ ದಾರಿಯಾಗಿಯೂ ಸತ್ರಂ ದಾರಿಯಾಗಿಯೂ ಆರು ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಮಲೆಯಿಳಿದು ಶಬರಿಮಲೆಯನ್ನು ತಲುಪುವರಿದ್ದಾರೆ. ಈ ದಾರಿಯನ್ನು ಹೆಚ್ಚಾಗಿ ಬಳಸುವವರು ಇಡುಕ್ಕಿ ಜಿಲ್ಲೆಯವರು ಮತ್ತು ತಮಿಳುನಾಡಿನವರಾಗಿದ್ದಾರೆ.

ವಿವಿಧ ಸ್ಥಳಗಳಿಂದ ಪಂಪಾಕ್ಕಿರುವ ದೂರ :
  • ಕೋಟ್ಟಯಂ - ಪಂಪಾ (ಎರುಮೇಲಿ ದಾರಿ) 136 ಕಿ.ಮೀ
  • ಕೋಟ್ಟಯಂ - ಪಂಪಾ (ತಿರುವಲ್ಲಂ, ಪತ್ತನಂತಿಟ್ಟ ದಾರಿ ) 123 ಕಿ.ಮೀ
  • ತಿರುವನಂತಪುರಂ - ಪಂಪಾ (ಕೊಟ್ಟಾರಕ್ಕರ, ಅಡೂರು, ಪತ್ತನಂತಿಟ್ಟ ದಾರಿ) 188 ಕಿ.ಮೀ
  • ತಿರುವನಂತಪುರಂ - ಪಂಪಾ (ಪುನಲೂರ್, ಪತ್ತನಂತಿಟ್ಟ ದಾರಿ) 180 ಕಿ.ಮೀ
  • ಚೆಂಗನ್ನೂರು - ಪಂಪಾ 93 ಕಿ.ಮೀ
  • ಎರ್ನಾಕುಳಂ - ಪಂಪಾ (ಕೋಟ್ಟಯಂ ದಾರಿ) 200 ಕಿ.ಮೀ
  • ಆಲಪ್ಪುಳ - ಪಂಪಾ (ಚಂಗನಾಶ್ಶೇರಿ ದಾರಿ) 137 ಕಿ.ಮೀ
  • ಪಂದಳಂ - ಪಂಪಾ (ಪತ್ತನಂತಿಟ್ಟ ದಾರಿ) 86 ಕಿ.ಮೀ
  • ಎರುಮೇಲಿ - ಪಂಪಾ (ಕಾಳಕೆಟ್ಟು, ಅಳುದಾ, ಕರಿಮಲೆ ದಾರಿಯಾಗಿ ಕಾಲ್ನಡೆ) 51 ಕಿ.ಮೀ
  • ಎಲುಮೇಲಿ - ಪಂಪಾ (ಮೂಕ್ಕುಟ್ಟುತರ, ಪಂಪಾ ಕಣಿವೆ ದಾರಿ) 46 ಕಿ.ಮೀ
  • ಕುಮಳಿ - ಪಂಪಾ (ಎರುಮೇಲಿ, ವಂಡಿಪ್ಪೆರಿಯಾರ್ ದಾರಿ) 180 ಕಿ.ಮೀ.
ರೈಲಿನಲ್ಲಿ ಬರುವವರು ಕೋಟ್ಟಯಂನಲ್ಲಿ ಅಥವಾ ಚೆಂಗನ್ನೂರಿನಲ್ಲಿ ಇಳಿದು ರಸ್ತೆಯ ಮೂಲಕ ಪಂಪಾವನ್ನು ತಲುಪುತ್ತಾರೆ. ಶಬರಿಮಲೆಗೆ ಬಹಳ ಹತ್ತಿರದ ಸ್ಥಳ ಪಂಪಾ ಆದರೂ ಕಟ್ಟಡಗಳು ಕಡಿಮೆಯಾಗಿರುವುದರಿಂದ ಇಲ್ಲಿ ವಸತಿಯೇ ಮೊದಲಾದ ಸೌಕರ್ಯಗಳು ಕಡಿಮೆ. ಹತ್ತಿರದ ಇತರ ಪಟ್ಟಣಗಳು ಈ ಕೆಳಗಿನಂತಿವೆ :
  • ಎರುಮೇಲಿ
  • ಪತ್ತನಂತಿಟ್ಟ
  • ರಾಣಿ
  • ಮಾವೇಲಿಕ್ಕರ
  • ಕೋಟ್ಟಯಂ
  • ಕೊಚ್ಚಿ
  • ಚಂಗನಾಶ್ಶೇರಿ