malayalam versiontamil versionkannada versionenglish version
homephoto gallerymathrubhumi officesayappa templespooja calendarguest book
ಸ್ವಾಮಿ ಶರಣಂ || ಮಂಡಲ ಪೂಜೆಗಾಗಿ ಶಬರಿಮಲೆ ನಡೆ ತೆರೆಯಿತು. || ಮಾತೃಭೂಮಿ ಶಬರಿಮಲೆ ಪೋರ್ಟಲ್‌ನಲ್ಲಿ ಈ ಬಾರಿ ಮಲೆಯಾಳದ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್ ಭಾಷೆಗಳಲ್ಲೂ ಇವೆ. || ಶಬರಿಮಲೆ ಶುಚೀಕರಣ ಕೆಲಸಕ್ಕಾಗಿ ಈಬಾರಿ 600 ಮಂದಿ ಕಾರ್ಮಿಕರು ಇರುತ್ತಾರೆ. ||
ತೀರ್ಥಯಾತ್ರೆ  ವಿಶ್ರಾಂತಿ ಧಾಮಗಳು

ವಿಶ್ರಾಂತಿ ಧಾಮಗಳು

ಮಲೆಯಾತ್ರಾ ಮಧ್ಯದಲ್ಲಿ ಅಯ್ಯಪ್ಪ ವ್ರತಧಾರಿಗಳು ಬಿರಿಮಾಡಲು ಮತ್ತು ವಿಶ್ರಮಿಸಲು ಕೆಲವು ಕ್ಷೇತ್ರಗಳನ್ನು ಆಯ್ದುಕೊಳ್ಳುವರು. ಮಧ್ಯ ತಿರುವಾಂಕೂರಿನ ಕೆಲವು ಕ್ಷೇತ್ರಗಳನ್ನು ಮಂಡಲ - ಮಕರ ವಿಳಕ್ಕ್ ಕಾಲದಲ್ಲಿ ಅಯ್ಯಪ್ಪ ವ್ರತಧಾರಿಗಳು ವಿಶ್ರಾಂತಿ ಧಾಮಗಳನ್ನಾಗಿ ಮಾಡಿಕೊಳ್ಳುತ್ತಾರೆ. ಆ ಕ್ಷೇತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.

ತಿರುನಕ್ಕರ ಮಹಾದೇವ ಕ್ಷೇತ್ರ
ತಾವು ಮಾಡಿತ ತಾಪ - ಪುಣ್ಯಗಳನ್ನು ಇರುಮುಡಿಯಲ್ಲಿಟ್ಟು ಶಬರಿಮಲೆ ತೀರ್ಥಯಾತ್ರಾ ಮಧ್ಯದಲ್ಲಿ ಸಿಗುವ ಪ್ರಧಾನವಾದ ವಿಶ್ರಾಂತಿಧಾಮವೇ ಕೋಟ್ಟಯಂ ತಿರುನಕ್ಕರ ಮಹಾದೇವನ ಕ್ಷೇತ್ರ. ಇದು ಕೇರಳದ ಪ್ರಧಾನವಾದ ಕ್ಷೇತ್ರಗಳಲ್ಲೊಂದು. ರಾಜ್ಯದ ಒಳಗಿನಿಂದಲೂ ಹೊರಗಿನಿಂದಲೂ ರೈಲು ದಾರಿಯಾಗಿ ಕೋಟ್ಟಯಂನ್ನು ತಲುಪುವ ಅಯ್ಯಪ್ಪ ವ್ರತಧಾರಿಗಳು ಮೊತ್ತಮೊದಲು ಭೇಟಿನೀಡುವ ಪುಣ್ಯ ಕ್ಷೇತ್ರವೆಂಬ ಖ್ಯಾತಿಯೂ ತಿರುನಕ್ಕರಕ್ಕಿದೆ. ೪೧ ದಿನಗಳ ಚಿರಪ್ಪ್ ಮಹೋತ್ಸವದೊಂದಿಗೆ ಇಲ್ಲಿ ಮಂಡಲ ಕಾಲವು ಆಚರಿಸಲ್ಪಡುತ್ತದೆ. ಧೂಪದೀಪ ಮೇಳಗಳ ವಿಜೃಂಭಣೆಯೊಂದಿಗೆ ಆಚರಿಸಲ್ಪಡುವ ಚಿರಪ್ಪ್ ಮಹೋತ್ಸವದಲ್ಲಿ ಈಗ ಅಲ್ಪ ಸ್ವಲ್ಪ ಬದಲಾವಣೆಯಾಗಿದೆ. ಭಕ್ತಜನ ಸಂದಣಿಯನ್ನು ಗಮನಿಸಿದ ದೇವಸ್ವಂ ಬೋರ್ಡ್ ತಿರುನಕ್ಕರ ಕ್ಷೇತ್ರದಿಂದ ಪಂಪಾನಕ್ಕೆ ದಿನನಿತ್ಯವೂ ಬಸ್ ಸರ್ವೀಸ್ ಏರ್ಪಡಿಸಿದೆ. ರಾತ್ರಿ ೯.೩೦ ಕ್ಕೆ ಪಂಪಾಕ್ಕೆ ಬಸ್ ಹೊರಡುವುದು.

ಕ್ಷೇತ್ರಕ್ಕೆ ಹೊಂದಿರುವ ಕೊಳವು ಅಯ್ಯಪ್ಪ ವ್ರತಧಾರಿಗಳಿಗೆ ಬಹಳ ಪ್ರಯೋಜನಕರವಾದುದಾಗಿದೆ. ಭಕ್ತಜನರಿಗಾಗಿ ಕೋಟ್ಟಯಂ ನಗರ ಸಭೆಯ ನೇತೃತ್ವದಲ್ಲಿ ತಿರನಕ್ಕರ ದೇವಸ್ವಂ ಬೋರ್ಡ್ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಿದೆ. ಏಕಕಾಲದಲ್ಲಿ ೧೦೦ ಕ್ಕಿಂತಲೂ ಹೆಚ್ಚು ವಾಹನಗಳನ್ನು ನಿಲ್ಲಿಸಲು ಸಾಧ್ಯವಿರುವ ವಿಶಾಲವಾದ ಮೈದಾನವನ್ನು ಮಂಡಲ - ಮಕರ ಕಾಲದಲ್ಲಿ ಅಯ್ಯಪ್ಪ ಭಕ್ತರಿಗಾಗಿ ತೆರೆಯಲಾಗುತ್ತದೆ. ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಲ್ಲಿ ಅಯ್ಯಪ್ಪ ಭಕ್ತರಿಗೆ ವಾಹನಗಳ ಸೌಕರ್ಯವನ್ನು ಇಲ್ಲಿ ಏರ್ಪಡಿಸಿದ್ದಾರೆ.

ಕಡಪ್ಪಾಟ್ಟೂರ್ ಕ್ಷೇತ್ರ
ಕಡಪ್ಪಾಟ್ಟೂರಪ್ಪನ ಸನ್ನಿಧಾನವು ಶಬರಿಮಲೆ ತೀರ್ಥಾಟಕರ ಪ್ರಧಾನ ವಿಶ್ರಾಂತಿ ಧಾಮಗಳಲ್ಲೊಂದು. ಉತ್ತರ ಕೇರಳದ ಮೂಲಕ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಮೊದಲಾದ ರಾಜ್ಯಗಳಿಂದ ಪ್ರತಿವರ್ಷವೂ ಸಹಸ್ರಾರು ಅಯ್ಯಪ್ಪ ಭಕ್ತರು ಕಡಪ್ಪಾಟ್ಟೂರ್ ದಾರಿಯಾಗಿ ಶಬರಿಮಲೆಗೆ ಪ್ರಯಾಣಿಸುತ್ತಾರೆ. ಬಿರಿ ಕಟ್ಟುವುದಕ್ಕೂ ವಿಶ್ರಾಂತಿ ಮಾಡುವುದಕ್ಕೂ ಸಾಧ್ಯವಾಗುವಂತಿರುವ ವಿಶಾಲವಾದ ಕ್ಷೇತ್ರ ಪರಿಸರ, ಕಟ್ಟಡಗಳು ಹಾಗೂ ಕ್ಷೇತ್ರವನ್ನು ಸವರಿಕೊಂಡು ಹರಿಯುವ ಮೀನಚ್ಚಿಲ್ ನದಿಯ ಸೌಂದರ್ಯವು ತೀರ್ಥಯಾತ್ರಿಕರನ್ನು ಕೈಬೀಸಿ ಕರೆಯುತ್ತದೆ.

ನಿಲೈಕ್ಕಲ್ ಮಹಾದೇವ ಕ್ಷೇತ್ರ
ಶಬರಿಮಲೆಗೆ ಬಹಳ ಸಮೀಪವಿರುವ ಕ್ಷೇತ್ರವೇ ನಿಲೈಕ್ಕಲ್ ಕ್ಷೇತ್ರ. ಮಹಾದೇವ ಕ್ಷೇತ್ರ ಮತ್ತು ಪಳ್ಳಿಯರಕ್ಕಾವ್ ದೇವೀ ಕ್ಷೇತ್ರ ಇಲ್ಲಿದೆ. ಅಯ್ಯಪ್ಪನ ತಂದೆ ಪರಶಿವನೆಂಬ ನಂಬಿಕೆ. ಆದುದರಿಂದ ಶಬರಿಮಲೆಗೆ ಹೋಗುವ ಅಯ್ಯಪ್ಪ ಭಖ್ತರು ಈ ಕ್ಷೇತ್ರವನ್ನು ಸಂದರ್ಶಿಸುತ್ತಾರೆ. ಇಲ್ಲಿ ಬಿರಿ ಕಟ್ಟುವುದಕ್ಕೂ ಸ್ನಾನಕ್ಕೂ ಸೌಕರ್ಯವಿದೆ.



ವೈಕ್ಕಂ ಕ್ಷೇತ್ರ
ಶ್ರೀ ಧರ್ಮಶಾಸ್ತಾರನ ದರ್ಶನಾಕಾಂಕ್ಷಿಗಳ ಶರಣು ಘೋಷವು ವೈಕ್ಕಂ ಕ್ಷೇತ್ರ ಪರಿಸರವನ್ನು ಭಕ್ತಿಸಾಂದ್ರವನ್ನಾಗಿಸುತ್ತದೆ. ಧರ್ಮಶಾಸ್ತಾರನ ದರ್ಶನದ ಮೊದಲು ವೈಕ್ಕತ್ತಪ್ಪನನ್ನು ದರ್ಶಿಸುವುದು ಮಹತ್ತರವಾದುದೆಂಬ ನಂಬಿಕೆಯಿದೆ. ಪಿತೃ - ಪುತ್ರ ಸಂಬಂಧ ಹಾಗೂ ಲೌಕಿಕ - ಅಲೌಕಿಕ ಭಾವ ಸಮನ್ವಯದ ಪರಿಪೂರ್ಣತೆಯನ್ನು ನಾವು ವೈಕ್ಕಂ ಕ್ಷೇತ್ರ ಹಾಗೂ ಶಬರಿಮಲೆಗಳೊಳಗೆ ಕಾಣುತ್ತೇವೆ. ವೈಕ್ಕಂ ಕ್ಷೇತ್ರವನ್ನು ಸಂದರ್ಶಸಿದ ದಿನವೇ ಕಡುತುರುತ್ತಿ ಮಹಾದೇವ ಕ್ಷೇತ್ರ ಹಾಗೂ ಶಬರಿಮಲೆಗಳೊಳಗೆ ಕಾಣುತ್ತೇವೆ. ವೈಕ್ಕಂ ಕ್ಷೇತ್ರವನ್ನು ಸಂದರ್ಶಿಸಿದ ದಿನವೇ ಕಡುತುರುತ್ತಿ ಮಹಾದೇವ ಕ್ಷೇತ್ರ ಮತ್ತು ಏಟ್ಟು ಮಾನೂರು ಮಹಾದೇವ ಕ್ಷೇತ್ರಗಳನ್ನು ಸಂದರ್ಶಿಸುವುದು ಕೈಲಾಸ ದರ್ಶನಕ್ಕೆ ಸಮಾನವಾದುದೆಂಬ ವಿಶ್ವಾಸವಿದೆ. ವೈಕ್ಕಂ ಕ್ಷೇತ್ರ ದರ್ಶನವು ಶ್ರೇಯಸ್ಕರವಾಗಲು ಪ್ರಿಯ ಪುತ್ರನಾದ ಉದಯನಾಪುರತ್ತಪ್ಪನಿಗೂ ನಮಸ್ಕರಿಸಬೇಕೆಂಬ ನಂಬಿಕೆಯಿದೆ. ಇದು ಪಿತೃ - ಪುತ್ರ ಸಂಬಂಧಕ್ಕೆ ಉತ್ತಮ ಉದಾಹರಣೆಯಾಗಿದೆ. ಅರುಣೋದಯದ ಕಾಲದಲ್ಲಿ ಸಕಲ ಮುನಿಜನ ವಂದಿತನೂ ಜ್ಞಾನದಾತನೂ ಆದ ದಕ್ಷಿಣಾಮೂರ್ತಿಯಾಗಿಯೂ ಮಧ್ಯಾಹ್ನದ ಕಾಲದಲ್ಲಿ ಪಾರ್ಥನಿಗೆ ಪಾಶುಪತಾಸ್ತ್ರವನ್ನು ನೀಡಿದ ಕಿರಾತಮೂರ್ತಿಯಾಗಿಯೂ ಸಂಧ್ಯಾಕಾಲದಲ್ಲಿ ಭಾರತೀಯ ದಾಂಪತ್ಯದ ಆದರ್ಶ ಪ್ರತೀಕವಾಗಿ ಉಮಾ - ಪುತ್ರರಿಂದೊಡಗೂಡಿ ವಿರಾಜಮಾನನಾಗಿರುವ ಉಮಾಮಹೇಶ್ವರನಾಗಿಯೂ ವಿಜೃಂಭಿಸುವ ನಟರಾಜ ಮೂರ್ತಿ ಸಕಲ ವರದಾಯಕನೂ ಸಕಲಾಭೀಷ್ಟಪ್ರದಾಯಕನೂ ಆಗಿದ್ದಾನೆ.

ಇಲ್ಲಿಗೆ ಬರುವ ಭಕ್ತಾದಿಗಳಲ್ಲಿ ಹೆಚ್ಚಿನವರೂ ಸಮೀಪದ ರಾಜ್ಯಗಳಿಂದ ಬರುವ ಅಯ್ಯಪ್ಪ ಭಕ್ತರಾಗಿದ್ದಾರೆ. ಎಂಟು ಎಕರೆಗಳಿಗಿಂತ ಹೆಚ್ಚು ವಿಶಾಲವಾದ ಕ್ಷೇತ್ರದ ಪ್ರಾಕಾರ, ಸುತ್ತಲೂ ಗೋಡೆಗಳಿಂದ ಆವೃತವಾದ ವಲಿಯಚೀರ ಎಂದೇ ಖ್ಯಾತಿಯಾಗಿರುವ ವಿಶಾಲವಾದ ಕ್ಷೇತ್ರ ಸರೋವರ, ಬಿರಿ ಕಟ್ಟುವುದಕ್ಕೂ ವಿಶ್ರಾಂತಿ ಪಡೆಯುವುದಕ್ಕೂ ಸೌಕರ್ಯವನ್ನು ಹೊಂದಿರುವ ಭೋಜನ ಶಾಲೆ ಮೊದಲಾದ ಸೌಕರ್ಯಗಳು ಭಕ್ತಾದಿಗಳನ್ನು ವೈಕ್ಕಂ ಕ್ಷೇತ್ರದತ್ತ ಆಕರ್ಷಿಸುತ್ತದೆ. ದೀರ್ಘ ಯಾತ್ರೆಯನ್ನು ಮಾಡಿ ಬರುವ ಅಯ್ಯಪ್ಪ ವೃತಧಾರಿಗಳು ಕ್ಷೇತ್ರದೊಳಗೆ ಕುಳಿತಾಗ ಸಮೀಪದ ವೆಂಬನಾಡು ಹಿನ್ನೀರಿನಿಂದ ನಿರಂತರವಾಗಿ ಬೀಸುವ ತಂಗಾಳಿಯು ಅವರಲ್ಲಿ ನವೋನ್ಮೇಷವನ್ನು ಮೂಡಿಸುತ್ತದೆ.

ವೃತಾನುಷ್ಠಾನಗಳೊಂದಿಗೆ ಬರುವ ಭಕ್ತಾದಿಗಳು ತೀರ್ಥದ ಸರೋವರದಲ್ಲಿ ಸ್ನಾನ ಮಾಡಿ ದೇವಾಲಯದ ನಡೆಯಲ್ಲಿ ಕಟ್ಟ ಕಟ್ಟಿ ಮಲೆ ಮೆಟ್ಟುವುದು ಪುಣ್ಯವೆಂಬ ವಿಶ್ವಾಸವಿದೆ. ಅನ್ನದಾನ ಪ್ರಭುವಾದ ವೈಕತ್ತಪ್ಪನ ಸನ್ನಿಧಿಯಲ್ಲಿ ಅನ್ನದಾನ ಟ್ರಸ್ಟ್ ದಿನನಿತ್ಯವೂ ನಡೆಸುವ ಪ್ರಾತಃಭೋಜನ (ಪ್ರಾದಲ್‌ಸದ್) ದಲ್ಲಿ ಭಾಗವಹಿಸುವ ಅವಕಾಶವೂ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಆರಙ್ಮಳ ಪಾರ್ಥಸಾರಥಿ ಕ್ಷೇತ್ರ
ಆರಙ್ಮಳ ಪಾರ್ಥಸಾರಥಿ ಕ್ಷೇತ್ರವು ಅಯ್ಯಪ್ಪ ಮಂತ್ರವನ್ನು ತಮ್ಮ ಹೃದಯಗಳಿಗೆ ಆವಾಹಿಸಿ ಬರುವ ಅಯ್ಯಪ್ಪ ವೃತಧಾರಿಗಳ ಪ್ರಧಾನವಾದ ವಿಶ್ರಾಂತಿ ಧಾಮವಾಗಿದೆ. ಪಾರ್ಥನ ಸಾರಥಿಯಾದ ಕೃಷನನ್ನೇ ಪ್ರತಿಷ್ಠಾಪಿಸಲಾಗಿದೆ. ಭಾರತ ಯುದ್ಧದಲ್ಲಿ ಭೀಷ್ಮರು ಅರ್ಜುನನ್ನು ನಿಗ್ರಹಿಸುವರೆಂದು ಸಂಶಯಿಸಿದ ಶ್ರೀಕೃಷ್ಣನು ಕೋಪಗೊಂಡು ವಿಶ್ವರೂಪವನ್ನು ತಾಳಿದನು. ಇದೇ ರೂಪದಲ್ಲಿ ಚತುರ್ಬಾಹು ವಿಗ್ರಹವನ್ನು ಆರಙ್ಮುಳ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆರಙ್ಮುಳ ಕ್ಷೇತ್ರವು ಪಂಪಾತೀರದಿಂದ ಎತ್ತರದಲ್ಲಿದೆ. ಅನ್ನದಾನವು ಇಲ್ಲಿನ ಪ್ರಧಾನ ಸೇವೆ. ಜನಪದ ಸಾಹಿತ್ಯಗಳಿಂದ, ಬರಹಗಳಿಂದ ಆರಙ್ಮುಳ ನೀರಾಟ, ಆರಙ್ಮುಳ ಕನ್ನಡಿ, ಆರಙ್ಮುಳ ಅಡಕ್ಕ ಎಂಬಿವುಗಳ ಕುರಿತು ಕೇಳಿರುವ ಅನ್ನ ಪ್ರದೇಶದವರಿಗೆ ಆರಙ್ಮುಳವನ್ನು ನೋಡಿ ತಿಳಿಯಲು ಶಬರಿಮಲೆ ಯಾತ್ರೆಯ ಸದವಕಾಶವನ್ನೊದಗಿಸುತ್ತದೆ..

ಮಂಡಲ ಪೂಜೆಗೆ ಶಬರಿಮಲೆ ಅಯ್ಯಪ್ಪನಿಗೆ ತೊಡಿಸುವ ಚಿನ್ನದ ಕವಚವನ್ನು ಸುರಕ್ಷಿತವಾಗಿ ಇಡುವುದು ಆರಙ್ಮುಳದಲ್ಲಿ ಚಿನ್ನದ ಕವಚದ ಘೋಷಯಾತ್ರೆ ಆರಂಭವಾಗುವುದು ಆರಙ್ಮುಳ ಕ್ಷೇತ್ರದಿಂದಲೇ ಆಗಿದೆ.

ಪಂದಳಂ ವಲಿಯ ಕೋಯಿಕ್ಕಲ್ ಧರ್ಮಶಾಸ್ತಾ ಕ್ಷೇತ್ರ
ಪಂದಳವು ಅಯ್ಯಪ್ಪ ವ್ರತಧಾರಿಗಳ ಪ್ರಧಾನ ವಿಶ್ರಾಂತಿ ಧಾಮಗಳಲ್ಲೊಂದು. ಅಯ್ಯಪ್ಪನು ಬೆಳೆದ ಅರಮನೆಗೆ ಹೊಂದಿಕೊಂಡು ಒಂದು ಧರ್ಮಶಾಸ್ತಾ ದೇವಾಲಯವಿದೆ. ಮಕರ ಸಂಕ್ರಮಣದ ದಿನ ಅಯ್ಯಪ್ಪ ವಿಗ್ರಹಕ್ಕೆ ತೊಡಿಸುವ ತಿರುವಾಭರಣಗಳನ್ನು ಸಂರಕ್ಷಿಸಿಡುವುದು ಕ್ಷೇತ್ರಕ್ಕೆ ಹೊಂದಿಕೊಂಡಿರುವ ಅರಮನೆಯಲ್ಲಾಗಿದೆ. ಪಂದಳದ ಹಿರಿಯರು ನೀಡುವ ಜವಾಬ್ದಾರಿಯನ್ನು ಪಡೆದಿರುವ ಕಿರಿಯರೊಬ್ಬರು ತಿರವಾಭರಣದ ಘೋಷಯಾತ್ರೆಯನ್ನು ಮುನ್ನಡೆಸುತ್ತಾರೆ.

ಏಟ್ಟುಮಾನೂರು ಮಹಾದೇವ ಕ್ಷೇತ್ರ
ಏಟ್ಟುಮಾನೂರು ಮಹಾದೇವ ಕ್ಷೇತ್ರವು ಶಬರಿಮಲೆ ತೀರ್ಥಾಟಕರ ಪ್ರಧಾನ ವಿಶ್ರಾಂತಿ ಧಾಮವಾಗಿದೆ. ಏಟ್ಟುಮಾನೂರು, ಕಡುತುರುತ್ತಿ, ವೈಕ್ಕಂ ಎಂಬೀ ಶಿವಕ್ಷೇತ್ರಗಳನ್ನು ಒಟ್ಟಾಗಿ ದರ್ಶನ ಮಾಡುವುದು ಪುಣ್ಯಕಾರ್ಯವೆಂಬದಾಗಿ ಹಿಂದಿನಿಂದಲೇ ಭಕ್ತಾದಿಗಳು ತಿಳಿದಿದ್ದರು. ಆದುದರಿಂದಾಗಿ ರಾಜ್ಯದ ಉತ್ತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದಲೂ ಬರುವ ಅಯ್ಯಪ್ಪ ಭಕ್ತರು ಮೂರೂ ಕ್ಷೇತ್ರಗಳನ್ನು ಸಂದರ್ಶಿಸಿ ಶಬರಿಮಲೆ ಯಾತ್ರೆಯನ್ನು ಮುಂದುವರಿಸುತ್ತಾರೆ.