malayalam versiontamil versionkannada versionenglish version
homephoto gallerymathrubhumi officesayappa templespooja calendarguest book
ಸ್ವಾಮಿ ಶರಣಂ || ಮಂಡಲ ಪೂಜೆಗಾಗಿ ಶಬರಿಮಲೆ ನಡೆ ತೆರೆಯಿತು. || ಮಾತೃಭೂಮಿ ಶಬರಿಮಲೆ ಪೋರ್ಟಲ್‌ನಲ್ಲಿ ಈ ಬಾರಿ ಮಲೆಯಾಳದ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್ ಭಾಷೆಗಳಲ್ಲೂ ಇವೆ. || ಶಬರಿಮಲೆ ಶುಚೀಕರಣ ಕೆಲಸಕ್ಕಾಗಿ ಈಬಾರಿ 600 ಮಂದಿ ಕಾರ್ಮಿಕರು ಇರುತ್ತಾರೆ. ||
ತೀರ್ಥಯಾತ್ರೆ  ಪರಂಪರಾಗತ ದಾರಿ

ಪರಂಪರಾಗತ ದಾರಿ

ಎರುಮೇಲಿಯಿಂದ ಪಂಪಾ ವರೆಗಿನ ೫೧ ಕಿಲೋಮೀಟರ್ ದೀರ್ಘವಿರುವ ಪರಂಪರಾಗತವಾದ ಅರಣ್ಯ ದಾರಿಯು ಬಹಳ ಪ್ರಾಧಾನ್ಯವಿರುವುದಾಗಿದೆ. ಬಹಳಷ್ಟು ಪುಣ್ಯ ಸ್ಥಳಗಳನ್ನು ದಾಟಿ ಅರಣ್ಯದ ಮೂಲಕ ಕಾಲ್ನಡೆಯಾಗಿರುವ ಈ ಯಾತ್ರೆಯು ಭಕ್ತರಿಗೆ ಆತ್ಮಶುದ್ಧಿಗಿರುವ ದಾರಿಯಾಗಿದೆ. ಪೇರೂರು ತೋಡು, ಇರುಂಬುನಿಕ್ಕರ, ಅರಶುಮುಡಿಕ್ಕಾಡು, ಕಾಳಕೆಟ್ಟಿ, ಅಳುದಾನದಿ, ಕಲ್ಲಿಡಾಂಕುನ್ನು, ಇಂಜಿಪ್ಪಾರ ಕೋಟೆ, ಮುಕ್ಕುಯಿ, ಕರಿಯಿಲಾಂ ತೋಡು, ಕರಿಮಲ, ವಲಿಯಾನವಟ್ಟಂ, ಚೆರಿಯಾನವಟ್ಟಂ, ಎಂಬಿವುಗಳು ಎರುಮೇಲಿ ಮತ್ತು ಪಂಪಾಕ್ಕೆ ನಡುವೆ ಇರುವ ಪುಣ್ಯ ಸ್ಥಳಗಳಾಗಿವೆ. ಎರುಮೇಲಿಯಿಂದ ಕಾಳಕೆಟ್ಟಿಯ ವರೆಗೆ ೧೧ ಕಿಲೋಮೀಟರ್, ಕಾಳಕೆಟ್ಟಿಯಿಂದ ಅಳುದೆಗೆ ೨ ಕಿಲೋಮೀಟರ್, ಅಳುದೆಯಿಂದ ಪಂಪಾಕ್ಕೆ ೩೭ ಕಿಲೋಮೀಟರ್ ದೂರವಿದೆ. ಇರುಂಬನಿಕ್ಕರೆಯಿಂದ ಅರಶುಮುಡಿಕ್ಕಾಡಿಗೆ ಇರುವ ದೂರ ೨ ಕಿಲೋಮೀಟರ್. ಅಲ್ಲಿಂದ ಕಾಳಕೆಟ್ಟಿಗೆ ೫ ಕಿಲೋಮೀಟರ್ ದೂರವಿದೆ.

ಅಯ್ಯಪ್ಪ ವ್ರತಧಾರಿಗಳು ಮೊದಲು ಬರುವುದು ಎರುಮೇಲಿಗೆ. ಇಲ್ಲಿ ಪಂದಳ ರಾಜನಾದ ರಾಜಶೇಖರ ಪಾಂಡ್ಯನು ಕಟ್ಟಿಸಿದ ಒಂದು ಧರ್ಮಶಾಸ್ತಾ ಕ್ಷೇತ್ರವಿದೆ. ಶಾಸ್ತಾರ ಕ್ಷೇತ್ರದ ಅನತಿ ದೂರದಲ್ಲಿ ಅಯ್ಯಪ್ಪನ ನಂಬಿಗಸ್ಥನಾದ ಅನುಯಾಯಿಯೂ ಮುಸ್ಲಿಂ ಯೋಧನೂ ಆದ ವಾವರನ ಮಸೀದಿಯನ್ನು ಕಾಣಬಹುದು. ಎರುಮೇಲಿಯಿಂದ ಕಾಲ್ನಡಿಗೆ ಅನಂತರ ಯಾತ್ರೆಯನ್ನು ಮುಂದುವರಿಸುವರು. ಅಲ್ಲಿಂದ ಇರುಂಬುನಿಕ್ಕರ, ಅರಶುಮುಡಿಯನ್ನು ಸಂದರ್ಶಿಸಿದ ಭಕ್ತರು ಕಾಳಕಟ್ಟಿಯನ್ನು ತಲುಪುವರು. ಮಣಿಕಂಠನ ಮಹಿಷಿ ನಿಗ್ರಹಕ್ಕೆ ಪ್ರತ್ಯಕ್ಷದರ್ಶಿಯಾಗಲು ಬಂದ ಶ್ರೀ ಪರಮೇಶ್ವರನು ತನ್ನ ನಂದಿಯನ್ನು ಕಟ್ಟಿಹಾಕಿದ ಸ್ಥಳವೇ ಕಾಳಕಟ್ಟಿ. ಕಾಳಕಟ್ಟಿ ಕ್ಷೇತ್ರ ದರ್ಶನವನ್ನು ಮಾಡಿದ ಭಕ್ತರು ಪ್ರಕೃತಿ ಸುಂದರವಾದ ಅಳುದಾ ನದಿಯನ್ನು ತಲುಪಿ ವಿಶ್ರಾಂತಿಯನ್ನು ಪಡೆಯುವರು. ಮರುದಿನ ಬೆಳಿಗ್ಗೆ ಅಳುದಾನದಿಯಲ್ಲಿ ಮುಳುಗಿ ಸ್ನಾನ ಮಾಡಿ ಒಂದು ಸಣ್ಣ ಕಲ್ಲನ್ನು ತೆಗೆದುಕೊಂಡು ಯಾತ್ರೆಯನ್ನು ಮುಂದುವರಿಸುವ ಅಯ್ಯಪ್ಪ ಭಕ್ತರು ಅರಣ್ಯ ದಾರಿಯಾಗಿ ಕಲ್ಲಿಡಾಂಕುನ್ನಿಗೆ ತಲುಪುವರು. ಮಣಿಕಂಠನು ಮಹಿಷಿಯ ಶರೀರಕ್ಕೆ ಕಲ್ಲು ಮಣ್ಣುಗಳನ್ನು ಹಾಕಿ ಸಂಸ್ಕರಿಸಿದ ನೆನಪಿಗಾಗಿ ಅಳುದಾನದಿಯಿಂದ ಕಲ್ಲನ್ನು ಭಕ್ತರು ಇಲ್ಲಿ ಹಾಕುತ್ತಾರೆ. ಅರಣ್ಯ ದಾರಿಯಾಗಿ ಯಾತ್ರೆ ಮುಂದುವರಿಸುವ ಭಕ್ತರು ಮುಕ್ಕಯಿಗೆ ತಲುಪಿ ವಿಶ್ರಮಿಸುವರು. ಮರುದಿನ ಬೆಳಗ್ಗೆ ಕರಿಯಿಲಾಂ ತೋಡನ್ನು ದಾಟಿ ಕರಿಮಲೆಯ ಬುಡವನ್ನು ತಲುಪುವರು. ಈ ಬೆಟ್ಟದ ಮಣ್ಣು ಕಪ್ಪು ಬಣ್ಣದ್ದಾದುದರಿಂದ ಇದನ್ನು ಕರಿಮಲೆ ಎನ್ನುತ್ತಾರೆ. ಮುಂದೆ ಭಕ್ತರು ಶರಣು ಘೋಷದೊಂದಿಗೆ ಕಠಿಣವಾದ ಹಾಗೂ ಕಡಿದಾದ ಕರಿಮಲೆ ಬೆಟ್ಟವನ್ನೇರಲು ಪ್ರಾರಂಭಿಸುತ್ತಾರೆ. ಕರಿಮಲೆಯ ತುದಿಯಲ್ಲಿ ಕರಿಮಲೆನಾಥನಿಗೆ ಶಿರಬಾಗುವ ಅಯ್ಯಪ್ಪ ಭಕ್ತರು ಚೆರಿಯಾನವಟ್ಟಂ ಮತ್ತು ಪೆರಿಯಾನವಟ್ಟಂ ಎಂಬ ಸ್ಥಳಗಳನ್ನು ದಾಟಿ ಪುಣ್ಯ ನದಿಯಾದ ಪಂಪಾ ನದಿಯ ತೀರವನ್ನು ತಲುಪುವರು.