ಕ್ಷೇತ್ರ
ಆಚಾರ
ಶಬರಿಮಲೆಯಲ್ಲಿ ಈ ವಿಚಾರಗಳು ನೆನಪಿರಲಿ
- ಇರುಮುಡಿ ಕಟ್ಟು ಇಲ್ಲದೆ ಹದಿನೆಂಟು ಮೆಟ್ಟಲು ಹತ್ತಬಾರದು.
- 0 ರಿಂದ 50 ವರ್ಷ ಪ್ರಾಯದೊಳಗಿನ ಹೆಂಗಸರು ಮಲೆ ಏರಬಾರದು.
- ಶಬರಿಮಲೆಯಲ್ಲಿ ಉತ್ಸವದ ಪ್ರಯುಕ್ತ ಪಂಪಾ ನದೀ ತೀರದಲ್ಲಿ ಆರಾಟು ನಡೆಯುವ ದಿನ ಯುವತಿಯರು ಬರಬಾರದು.
- ಪ್ಲಾಸ್ಟಿಕ್ ಮತ್ತು ಪೊಲಿತಿನ್ ವಸ್ತುಗಳನ್ನು ನಿಷೇಧಿಸಲಾಗಿದೆ.
- ಧೂಮಪಾನ ಮತ್ತು ತಾಂಬೂಲ ಮೆಲ್ಲುವುದನ್ನು ನಿಷೇಧಿಸಲಾಗಿದೆ.
- ತೆರೆದ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು.
- ಪಂಪಾ ನದಿಯನ್ನು ಮಲಿನಗೊಳಿಸಬಾರದು. ಎಂಜಲು ಎಲೆಯನ್ನು ಮತ್ತು ಉಟ್ಟ ಬಟ್ಟೆಯನ್ನು ಪಂಪಾ ನದಿಗೆ ಎಸೆಯುವುದು ಆಚಾರವೇ ಇಲ್ಲ.
- ಕಾಡು ನಾಶಕ್ಕೆ ಕಾರಣವಾಗುವ ಯಾವುದೇ ಕೆಲಸಗಳನ್ನು ಮಾಡಬಾರದು. ಒಲೆ ಮಾಡಿ ಆಹಾರ ತಯಾರಿಸುವವರು ಅಗತ್ಯ ಕಳೆದ ಕೂಡಲೇ ಒಲೆಗೆ ನೀರು ಹಾಯಿಸಿ ಬೆಂಕಿಯನ್ನು ಪೂರ್ಣಳಾಗಿ ನಂದಿಸಬೇಕು.
- ಶರಂಗುತ್ತಿಯಲ್ಲಿ ಶರಗಳ ಕೋಲನ್ನು ಮಾತ್ರ ನಾಟಬೇಕು.
- ಹದಿನೆಂಟು ಮೆಟ್ಟಲುಗಳಳ್ಲಿ ತೆಂಗಿನಕಾಯಿ ಒಡೆಯಬಾರದು. ಮೆಟ್ಟಲುಗಳ ಎರಡೂ ಬದಿಗಳಲ್ಲಿ ವ್ಯವಸ್ಥೆ ಮಾಡಲಾಗಿರುವ ಸ್ಥಳದಲ್ಲೇ ಒಡೆಯಬೇಕು.
- ಭಸ್ಮದ ಕೊಳಕ್ಕೆ ಎಣ್ಣೆ ಮತ್ತು ಸಾಬೂನು ಉಪಯೋಗಿಸಬಾರದು.