ಶರಣಂ ಅಯ್ಯಪ್ಪಾ
ವಾರ್ತೆಗಳು
ಶಬರಿಮಲೆಯಲ್ಲಿ ತೀರ್ಥಾಟಕರಿಗೆ ಸೌಕರ್ಯಗಳನ್ನು ಏರ್ಪಡಿಸಲಾಗಿದೆ
ತಿರುವನಂತಪುರಂ: ಶಬರಿಮಲೆ ತೀರ್ಥಾಟಕರಿಗೆ ಸೌಕರ್ಯಗಳನ್ನು ಏರ್ಪಡಿಸಿರುವುದಾಗಿ ದಕ್ಷಿಣ ರೈಲ್ವೇ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದೆ. ತೀರ್ಥಾಟಕರಿಗಾಗಿ ಪಂಪಾದಲ್ಲಿ ಪ್ರತ್ಯೇಕ ಕಂಪ್ಯೂಟರೀಕೃತ ಮುಂಗಡ ಕಾಯ್ದಿರಿಸುವ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ.
ಈ ಹಿಂದೆ ಘೋಷಿಸಲಾದ ಕೊಚ್ಚುವೇಳಿ - ಚೆನ್ನೈ, ಕೊಚ್ಚುವೇಳಿ - ಯಶವಂತಪುರ, ಎರ್ನಾಕುಳಂ - ಬೆಂಗಳೂರು ರೈಲುಗಳಿಗೆ ಹೊರತಾಗಿ ಆಂಧ್ರಪ್ರದೇಶದಿಂದ ಪ್ರತ್ಯೇಕ ರೈಲುಗಳನ್ನೂ ಓಡಿಸಲಾಗುವುದು.
ಜನದಟ್ಟಣೆ ಹೆಚ್ಚಾಗುವುದಿದ್ದರೆ ಈಗ ಓಡುತ್ತಿರುವ ರೈಲುಗಳಲ್ಲಿ ಹೆಚ್ಚು ಬೋಗಿಗಳನ್ನು ಏರ್ಪಡಿಸುವಂತೆಯೂ ತೀರ್ಮಾನಿಸಲಾಗಿದೆ. ತೀರ್ಥಾಟಕರು ಅತಿ ಹೆಚ್ಚು ಉಪಯೋಗಿಸುತ್ತಿರುವ ಕೋಟ್ಟಯಂ, ಚೆಂಗನ್ನೂರು, ಎರ್ನಾಕುಳಂ, ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಇನ್ನೂ ಹೆಚ್ಚು ಅನ್‌ರಿಸರ್‌ವ್‌ಡ್ ಟಿಕೆಟ್ ಕೌಂಟರ್‌ಗಳನ್ನು ಏರ್ಪಡಿಸಲಾಗುವುದು. ಮುಂಗಡ ಕಾಯ್ದಿರಿಸುವ ಕೇಂದ್ರಗಳನ್ನು ಬಲಪಡಿಸಲಾಗುವುದು. ಪ್ರಯಾಣಿಕರಿಗೆ ವಿವಿಧ ಭಾಷೆಗಳಲ್ಲಿ ಮಾಹಿತಿ ನೀಡುವ ಮಾಹಿತಿ ಕೇಂದ್ರಗಳನ್ನು ಏರ್ಪಡಿಸಲಾಗಿದೆ.
ಇದಕ್ಕಾಗಿ ಅಗತ್ಯವಿರುವ ನೌಕರರನ್ನು ಸ್ಟೇಶನುಗಳಲ್ಲಿ ನೇಮಿಸಲಾಗುವುದು.
ಮಕರವಿಳಕ್ಕಿನ ಜನದಟ್ಟಣೆ ಹೆಚ್ಚಾಗುವ ಜನವರಿ 14 ರಿಂದ 16 ರ ತನಕ ಕಾರ್ಯಗಳೆಲ್ಲ ಬಹಳ ಸುಗವಾಗಿ ಸಾಗುವುದೆಂದು ಖಾತರಿಪಡಿಸುವುದಕ್ಕಾಗಿ ಸೀನಿಯರ್ ಡಿವಿಶನಲ್ ಕಮರ್ಷಿಯಲ್ ಮೇನೇಜರರ ನೇತೃತ್ವದಲ್ಲಿ ನೌಕರರ ತಂಡವು ಕೋಟ್ಟಯಂನಲ್ಲಿ ಕಾರ್ಯನಿರತವಾಗಲಿದೆ. ತೀರ್ಥಾಟಕರಿಗೆ ಸ್ಟೇಶನುಗಳಲ್ಲಿ ಅಗತ್ಯವಿರುವಷ್ಟು ಶುದ್ಧನೀರನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ವಾರ್ತೆಗಳು